ಲೈಂಗಿಕ ಸಂಪರ್ಕದಿಂದ ದೈಹಿಕ ತೃಷೆ ಈಡೇರುವುದು ಮಾತ್ರವಲ್ಲ ಅದರಿಂದ ಹಲವು ಲಾಭಗಳಿವೆ. ದೇಹ ಫಿಟ್ ಆಗಿರಲು, ಮನಸ್ಸು ಆಹ್ಲಾದಗೊಳ್ಳಲು, ನಿತ್ಯದ ಜಂಜಾಟದಿಂದ ಮುಕ್ತಿ ಹೊಂದಲು ಸಂಭೋಗ ಸಹಕಾರಿ. ಆದರೆ, ಲೈಂಗಿಕ ಕ್ರಿಯೆಗೂ ಮೊದಲು ಏನೆಲ್ಲ ಮಾಡಬಾರದು ಎಂಬುದು ಅನೇಕರಿಗೆ ಗೊತ್ತಿರುವುದೇ ಇಲ್ಲ. ಆ ಬಗ್ಗೆ ವೈದ್ಯರು ಹೇಳುವುದೇನು ಎಂಬ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ.
ಸ್ಪೈಸಿ ಆಹಾರಗಳನ್ನು ಬದಿಗಿಡಿ:
ಲೈಂಗಿಕ ಸಂಪರ್ಕ ಮಾಡುವುದಕ್ಕೂ ಮೊದಲು ಯಾವ ಆಹಾರ ಸೇವನೆ ಮಾಡುತ್ತೀರಿ ಎಂಬುದು ಪ್ರಮುಖವಾಗುತ್ತದೆ.
ಗಂಡು-ಹೆಣ್ಣು ಸೇರುವುದಕ್ಕೂ ಮೊದಲು ಸ್ಪೈಸಿ ಆಹಾರಗಳನ್ನು ಸೇವಿಸಬಾರದು. ಒಂದೊಮ್ಮೆ ಖಾರದ ತಿಂಡಿ
ತಿಂದರೆ ಅದರಿಂದ ಉದರದಲ್ಲಿ ಗ್ಯಾಸ್ ಉತ್ಪತ್ತಿಯಾಗುತ್ತದೆ. ಅಷ್ಟೇ ಆಲ್ಲ, ಖಾರದ ವಸ್ತುಗಳ ಸೇವನೆಯಿಂದ
ಗುಪ್ತಾಂಗಗಳಲ್ಲಿ ಉರಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಸಂಭೋಗಕ್ಕೂ ಮೊದಲು ಈ ರೀತಿಯ
ಆಹಾರ ಕ್ರಮ ಸೇವಿಸ ಬೇಡಿ.
ಮದ್ಯ ಸೇವನೆ ಮಾಡಲೇಬಾರದು:
ಮದ್ಯ ಸೇವನೆ ಮಾಡಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಕೊಳ್ಳುವ ಹವ್ಯಾಸ ಅನೇಕರಲ್ಲಿ ಇರುತ್ತದೆ. ಆದರೆ,
ಹೀಗೆ ಮಾಡುವುದರಿಂದ ಮೈಥುನದಲ್ಲಿ ತೃಪ್ತಿ ಸಿಗುವುದಿಲ್ಲ
ಎಂಬುದು ಅಧ್ಯಯನದ ವರದಿ. ಕುಡಿದು ಸಂಭೋಗ ಮಾಡುವಾಗ ಪರಾಕಾಷ್ಠೆ ತಲುಪುವ ಸಾಧ್ಯತೆಗಳು ಕಡಿಮೆ ಆಗುತ್ತವೆಯಂತೆ.
ಹಾಗಾಗಿ ಈ ಸಂದರ್ಭದಲ್ಲಿ ಮದ್ಯ ಸೇವನೆಯಿಂದ ದೂರ ಉಳಿಯುವುದು ಉತ್ತಮ ಎನ್ನುತ್ತದೆ ಅಧ್ಯಯನ ವರದಿ.
ಎಲೆಕ್ಟ್ರಿಕ್ ಟೂತ್ ಬ್ರಶ್
ಬಳಕೆ ಬೇಡ!:
ಈ ವಿಚಾರ ಸ್ವಲ್ಪ ವಿಚಿತ್ರ ಎನಿಸಬಹುದು. ಆದರೂ ಇದು ಸತ್ಯ. ಲೈಂಗಿಕ ಸಂಪರ್ಕಕ್ಕೂ ಮೊದಲು ಹಲ್ಲುಜ್ಜಲು
ಎಲೆಕ್ಟ್ರಿಕ್ ಟೂತ್ ಬ್ರಶ್ ಹಾಗೂ ಆಲ್ಕೋಹಾಲ್ ಅಂಶವಿರುವ ಮೌತ್ ವಾಶ್ನರ್ಗಳನ್ನು ಬಳಕೆ
ಮಾಡಬಾರದಂತೆ.
ಶೇವಿಂಗ್ ಬೇಡ!:
ಸಂಭೋಗಕ್ಕೂ ಕೆಲವೇ ಗಂಟೆ ಮೊದಲು ಗುಪ್ತಾಂಗಗಳ ಮೇಲಿನ ಕೂದಲನ್ನು ಶೇವ್ ಮಾಡುವುದು ಅಪಾಯ. ಅದಕ್ಕೆ
ಕಾರಣವೂ ಇದೆ. ಶೇವ್ ಮಾಡಿದ ಸಂದರ್ಭದಲ್ಲಿ ಆ ಜಾಗ ಮತ್ತಷ್ಟು ಸೆನ್ಸಿಟಿವ್ ಆಗುತ್ತದೆ. ಜೊತೆಗೆ
ಚರ್ಮದ ಮೇಲಿನ ತೆಳು ಪದರ ಕಿತ್ತು ಹೋಗಿರುವ ಸಾಧ್ಯತೆ ಇರುತ್ತದೆ. ಇದರಿಂದ ಕಿರಿಕಿರಿ ಉಂಟಾಗಲೂಬಹುದು
ಎಂದು ಸಲಹೆ ನೀಡುತ್ತಾರೆ ತಜ್ಞರು.
ಸಕ್ಕರೆ ಪದಾರ್ಥ ಸವರಬೇಡಿ!:
ಸಂಭೋಗದ ವೇಳೆ ಚೋಕೋಲೇಟ್ ಮೊದಲಾದ ವಸ್ತುಗಳನ್ನು ಗುಪ್ತಾಂಗಕ್ಕೆ ಸವರುವ ಹವ್ಯಾಸ ನಿಮಗಿದೆಯೇ? ಹಾಗಿದ್ದರೆ
ಅದರಿಂದ ಅಪಾಯ ಕಟ್ಟಿಟ್ಟಬುತ್ತಿ. ಈ ರೀತಿ ಸಿಹಿ ಪದಾರ್ಥ ಬಳಕೆ ಮಾಡುವುದರಿಂದ ಸೋಂಕು ತಗಲುವ ಸಾಧ್ಯತೆ
ಇರುತ್ತದೆಯಂತೆ. ಹಾಗಾಗಿ ಆ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬುದು ವೈದ್ಯರ ಸಲಹೆ.